ವೃತ್ತಿ ಮಾರ್ಗದರ್ಶನ ಮೂಲಕ
ಸಾಮಾಜಿಕ ಪರಿಣಾಮ ಸೃಷ್ಟಿ
ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ

ವಿದ್ಯಾರ್ಥಿ ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ ಅಂದರೆ ಶಾಲೆ, ಮನೆ ಅಥವಾ ಇಂಟರ್ನೆಟ್ ಕೆಫೆಯಲ್ಲಿ ನಮ್ಮ ಪರೀಕ್ಷೆಯನ್ನು ಬರೆಯಬಹುದಾಗಿದೆ.

ಸಮಗ್ರ ಪರೀಕ್ಷೆ

ನಮ್ಮ ವೃತ್ತಿ ಮೌಲ್ಯಮಾಪನಾ ವೇದಿಕೆಯು ಪಠ್ಯಕ್ರಮ, ಅಂತರ್ಗತ ಸಾಮರ್ಥ್ಯಗಳು, ಆಸಕ್ತಿ ಮತ್ತು ವ್ಯಕ್ತಿತ್ವದ ಆಧಾರದಲ್ಲಿ ಜ್ಞಾನ ಮಟ್ಟವನ್ನು ಪರಿಗಣಿಸಿಕೊಂಡು ಇದು ವಿದ್ಯಾರ್ಥಿಯೊಬ್ಬನಿಗೆ ಅತ್ಯಂತ ಸಮಗ್ರ ವೃತ್ತಿ ಭದ್ರತೆಯನ್ನು ಒದಗಿಸುತ್ತದೆ.

ಬಹು ಭಾಷೆಗಳು

ಭಾರತದ ಪ್ರತಿ ಭಾಗದ ವಿದ್ಯಾರ್ಥಿಗಳನ್ನು ತಲುಪುವಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಭಾರತದಲ್ಲಿ ವಿದ್ಯಾರ್ಥಿಯ ಪರೀಕ್ಷೆ ನಡೆಸುವ ವಿಷಯಕ್ಕೆ ಬಂದಾಗ ಮಾತೃಭಾಷೆಯ ಪ್ರಾಮುಖ್ಯತೆಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ಪರೀಕ್ಷೆ ಪ್ರಸ್ತುತ ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಲಭ್ಯವಿದೆ. ಹಿಂದಿ, ತಮಿಳು, ತೆಲುಗು ಹಾಗೂ ಬೆಂಗಾಳಿಯಲ್ಲಿ ಶೀಘ್ರವೇ ಪರೀಕ್ಷೆ ಲಭ್ಯಗೊಳಿಸಲಿದ್ದೇವೆ.

ಸುಲಭ ಲಭ್ಯ.

ಭಾರತದಲ್ಲಿನ ಹಿರಿಯ ಮಾಧ್ಯಮಿಕ ಶಾಲೆಯ ಪ್ರತಿ ವಿದ್ಯಾರ್ಥಿಯನ್ನು ತಲುಪುವಲ್ಲಿ ನಾವು ಶ್ರಮವಹಿಸುತ್ತಿದ್ದೇವೆ. ಕಂಪ್ಯೂಟರ್ ಲ್ಯಾಬ್‌ಗಳಿಲ್ಲದ ಶಾಲೆಗಳು ಕೂಡಾ ಮಾರ್ಗ್ ವೇದಿಕೆಯನ್ನು ಉಪಯೋಗಿಸಬಹುದು.

ಕೈಗೆಟಕುವಿಕೆ

ಪ್ರತಿ ವಿದ್ಯಾರ್ಥಿಗೆ ಅತ್ಯುತ್ತಮವಾಗಿ ಹೊಂದುವ ವೃತ್ತಿಯನ್ನು ಅನ್ವೇಷಿಸಲು ಆತನಿಗೆ/ ಆಕೆಗೆ ಅವಕಾಶ ಒದಗಿಸಬೇಕು. ಇದನ್ನು ಭಾರತದಲ್ಲಿನ ಶ್ರೀಸಾಮಾನ್ಯನ ಕೈಗೆಟಕುವಂತೆ ಮಾಡುವುದು ನಮ್ಮ ಗುರಿಯಾಗಿದೆ.

ಸರಳೀಕೃತ ವರದಿಗಳು

ನಮ್ಮ ಸಿಸ್ಟಮ್ ಉತ್ಪಾದಿಸಿದ ವರದಿಗಳು ಸ್ವಯಂ ವಿವರಣಾತ್ಮಕವಾಗಿರುತ್ತವೆ ಮತ್ತು ವೃತ್ತಿಯ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವ ವಿದ್ಯಾರ್ಥಿಯ ಮನಸ್ಸನ್ನು ದೃಷ್ಟಿಯಲ್ಲಿಟ್ಟುಕೊಂಡು ಮನಃಶಾಸ್ತ್ರಜ್ಞರು ವಿನ್ಯಾಸಗೊಳಿಸಿದ್ದಾರೆ.

Explore career options through our blogs