ಹಂತ: 1

ಮಾರ್ಗ್‌ನಿಂದ ಪರವಾನಗಿ /ಲಾಗಿನ್‌ಗಳನ್ನು ಖರೀದಿಸಿ

ಹಂತ: 2

ಪರೀಕ್ಷೆಗೆ ದಿನಾಂಕವನ್ನು ಆರಿಸಿ

ಹಂತ:3

ಮಾರ್ಗ್ ತಂಡ ನಿಮ್ಮ ಶಾಲೆಯಲ್ಲಿ ಪರೀಕ್ಷೆಯನ್ನು ನಿಯೋಜಿಸುತ್ತದೆ

ವರದಿ

ನಿಮ್ಮ ಲಾಗಿನ್ ಐಡಿಯಲ್ಲಿ ಕಸ್ಟಮೈಝ್ ಆದ ವರದಿಗಳನ್ನು ಪಡೆಯಿರಿ
ನಮ್ಮ ಕಾರ್ಯಕ್ರಮ ವಿವರಗಳ ಕುರಿತು ವಿಚಾರಿಸಲುಶಾಲೆ ಡ್ಯಾಶ್‌ಬೋರ್ಡ್

ಎಲ್ಲಾ ನೋಂದಾಯಿತ ವಿದ್ಯಾರ್ಥಿಗಳ ವೃತ್ತಿ ಹೊಂದಾಣಿಕೆ ಮ್ತತು ವಿದ್ಯಾರ್ಥಿ ಕಾರ್ಯನಿರ್ವಹಣೆಯ ಸುಲಭ ಲಭ್ಯತೆ.

ವೃತ್ತಿ ಕೌನ್ಸೆಲರ್

ನಿಮ್ಮ ಶಾಲೆಯ ವೃತ್ತಿ ಮಾರ್ಗದರ್ಶನ ಕೋಶದ ಶಾಲಾ ಕೌನ್ಸೆಲರ್/ ಶಿಕ್ಷಕರಿಗೆ ಬಳಕೆಗೆ ಸಿದ್ಧ ವರದಿ.

ವಿದ್ಯಾರ್ಥಿಗಳ ಅಭಿವೃದ್ಧಿ ಅಗತ್ಯಗಳು

ವಿದ್ಯಾರ್ಥಿಯ ಯೋಗ್ಯತೆಯ ಮಾತೃಕೆಯನ್ನು ಅರ್ಥ ಮಾಡಿಕೊಳ್ಳುವುದರಿಂದ, ವಿದ್ಯಾರ್ಥಿಯು ಸಹಜವಾಗಿ ಪ್ರತಿಭೆ ಹೊಂದಿರುವ ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಲು ಶಿಕ್ಷಕರು ಮತ್ತು ಪೋಷಕರಿಗೆ ನೆರವಾಗುತ್ತದೆ ಮತ್ತು ಆತ/ಆಕೆ ಆಯಾ ಕ್ಷೇತ್ರದಲ್ಲಿ ಮಿಂಚಲು ಸಾಧಿಸಲು ನೆರವಾಗುತ್ತದೆ.

ಕಲಿಕಾ ಫಲಿತಾಂಶದ ಅಳತೆ.

ನಮ್ಮ ಪರೀಕ್ಷೆಯ ಪಠ್ಯಕ್ರಮ ಆಧಾರಿತ ವಿಭಾಗವು ಶಾಲೆಯಲ್ಲಿ ಬೋಧಿಸಿದ ಪ್ರಾಥಮಿಕ ಪರಿಕಲ್ಪನೆಗಳ ಅರ್ಥೈಸುವಿಕೆಯನ್ನು ಮೌಲ್ಯಮಾಪನ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ವಿಭಾಗದ ಈ ಪರೀಕ್ಷೆಯ ಫಲಿತಾಂಶಗಳನ್ನು ಅಗತ್ಯವಿದ್ದಲ್ಲಿ, ಸಿಬ್ಬಂದಿ/ ಶಿಕ್ಷಕರ ತರಬೇತಿಗಾಗಿ ಉಪಯೋಗಿಸಬಹುದು.ಸಮಗ್ರ ಮೌಲ್ಯಮಾಪನ

ನಮ್ಮ ವೇದಿಕೆಯು ಪಠ್ಯಕ್ರಮ ಆಧಾರಿತ ಜ್ಞಾನ, ಸಹಜ ಸಾಮರ್ಥ್ಯಗಳು, ವ್ಯಕ್ತಿತ್ವ ಹಾಗೂ ಆಸಕ್ತಿಗಳಂತಹ ವಿವಿಧ ಅಂಶಗಳ ಮೇಲೆ ವಿದ್ಯಾರ್ಥಿಗಳನ್ನು ಪರೀಕ್ಷಿಸುತ್ತದೆ. ಇದು ಭಾರತೀಯ ವಿದ್ಯಾರ್ಥಿಗಳಿಗಾಗಿ ಕಸ್ಟಮೈಝ್ ಮಾಡಿದ ಅತ್ಯಂತ ಸಮಗ್ರ ಪರೀಕ್ಷೆಯಾಗಿದೆ.

ವೃತ್ತಿ ಆಯ್ಕೆ ಮಾಡುವುದು

ನಮ್ಮ ಸಮಗ್ರ ಮೌಲ್ಯಮಾಪನವು ವಿದ್ಯಾರ್ಥಿಯ ಆಸಕ್ತಿ ಹಾಗೂ ಜ್ಞಾನ ಹಾಗೂ ಸಾಮರ್ಥ್ಯಕ್ಕೆ ಹೊಂದಾಣಿಕೆಯಾಗುವ ಅತ್ಯುತ್ತಮವಾಗಿ ಸೂಕ್ತವಾಗುವ ವೃತ್ತಿಯನ್ನು ಆತನಿಗೆ/ ಆಕೆಗೆ ಒದಗಿಸಲಾಗಿದೆ ಎಂಬುದನ್ನು ಖಾತ್ರಿಗೊಳಿಸುತ್ತದೆ.

ಸರಳ ವರದಿಗಳು

ವಿದ್ಯಾರ್ಥಿಗಳು ಪ್ರಸ್ತುತ 9ನೇ ಅಥವಾ 10ನೇ ತರಗತಿಯಲ್ಲಿದ್ದು, ಅವರಿಗೆ ಪರೀಕ್ಷಾ ಫಲಿತಾಂಶಗಳು ಹಾಗೂ ಸಲಹೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂತೆ ನಮ್ಮ ವರದಿಗಳನ್ನು ರೂಪಿಸಲಾಗುತ್ತದೆ.

ಉಚಿತ ವೃತ್ತಿ ವಿವರಗಳ ಯಾದಿ

ವಿದ್ಯಾರ್ಥಿಗಳು ನಮ್ಮ ಉಚಿತ ವೃತ್ತಿ ವಿವರಗಳ ಯಾದಿಯನ್ನು ಬಳಸಿಕೊಳ್ಳಬಹುದು, ಅದು ವೃತ್ತಿ ಆಯ್ಕೆಗಳನ್ನು ಅನ್ವೇಷಿಸಲು ಹಾಗೂ ತಮ್ಮ ವೃತ್ತಿ ಅರಿವನ್ನು ಹೆಚ್ಚಿಸಲು ಅವಕಾಶ ನೀಡುತ್ತದೆ.ಮಾರ್ಗ್‌ನಿಂದ ಪರವಾನಗಿ ಪಡೆದುಕೊಳ್ಳಲು ಪ್ರಕ್ರಿಯೆ ಏನು?

“ಈಗ ನೋಂದಾಯಿಸಿ” ಫಾರಂ ಅನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ನಮ್ಮ ತಂಡದ ಸದಸ್ಯರು ನಿಮ್ಮ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಲು ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ನಮ್ಮೊಂದಿಗಿನ ಸಹಭಾಗಿತ್ವಕ್ಕಾಗಿ ಮುಂದಿನ ಹಂತಗಳನ್ನು ವಿವರಿಸಲಿದ್ದಾರೆ. ನಂತರ ನಾವು ನಿಮ್ಮ ಶಾಲೆಗೆ ಪರೀಕ್ಷೆಯನ್ನು ಕಸ್ಟಮೈಝ್ ಮಾಡಲಿದ್ದೇವೆ ಮತ್ತು ವಿದ್ಯಾರ್ಥಿಗಳು ಹಾಗೂ ಶಾಲೆಯ ಆಡಳಿತಾಧಿಕಾರಿಗಳಿಗೆ ವೈಯಕ್ತಿಕ ಲಾಗಿನ್ ಐಡಿಗಳನ್ನು ರಚಿಸಲಿದ್ದೇವೆ. ನಿಮ್ಮ ಅಗತ್ಯಗಳಿಗೆ ತಕ್ಕಂತೆ ಪರವಾನಗಿಯನ್ನು ನೀವು ಉಪಯೋಗಿಸಬಹುದು.
ಮಾರ್ಗ್ ಪರೀಕ್ಷೆಯ ಅವಧಿ ಎಷ್ಟು?

ಒಬ್ಬ ವಿದ್ಯಾರ್ಥಿ ಸಾಮಾನ್ಯವಾಗಿ ಈ ಪರೀಕ್ಷೆ ಪೂರ್ಣಗೊಳಿಸಲು 2.5 ಗಂಟೆಗಳನ್ನು ತೆಗೆದುಕೊಳ್ಳುತ್ತಾನೆ. ವಿದ್ಯಾರ್ಥಿಯು ಸಾಮಾನ್ಯವಾಗಿ ಅದೇ ದಿನ ತನ್ನ ಕಸ್ಟಮೈಝ್ ಆದ ವರದಿಯನ್ನು ಪಡೆಯುತ್ತಾನೆ/ಳೆ.
ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತಾಧಿಕಾರಿಗೆ ಯಾವಾಗ ಪರೀಕ್ಷಾ ವರದಿ ಲಭ್ಯವಾಗುತ್ತದೆ?
ವಿದ್ಯಾರ್ಥಿಯು ಪರೀಕ್ಷೆಯನ್ನು ಪೂರ್ತಿಗೊಳಿಸಿದ ದಿನವೇ ವಿದ್ಯಾರ್ಥಿ ಹಾಗೂ ಶಾಲಾ ಅಧಿಕಾರಿಗಳು ಕಸ್ಟಮೈಝ್ ಆದ ವರದಿಯನ್ನು ಪಡೆಯುತ್ತಾರೆ. ಪರೀಕ್ಷೆಯ ದಿನಾಂಕದಿಂದ 6 ತಿಂಗಳ ತನಕ ವಿದ್ಯಾರ್ಥಿ ಹಾಗೂ ಶಾಲಾ ಕೌನ್ಸೆಲರ್‌ಗೆ ವೃತ್ತಿ ಮಾರ್ಗದರ್ಶನ ವರದಿ ಲಭ್ಯವಿರುತ್ತದೆ. ಪರವಾನಗಿಯನ್ನು ಖರೀದಿಸುವ ವೇಳೆಯಲ್ಲಿ ಯಾವುದೇ ನಿರ್ದಿಷ್ಟ ಅಗತ್ಯತೆಗಳನ್ನು ನೀವು ನಮ್ಮ ಬಳಿ ಹೇಳಬಹುದು.
ಈ ಕಾರ್ಯಕ್ರಮವು ಯಾವ ತರಗತಿಗಳನ್ನು ಉದ್ದೇಶವಾಗಿರಿಸಿಕೊಂಡಿದೆ?

ಈ ಮಾರ್ಗ್ ಪರೀಕ್ಷೆಯು ಪ್ರಸ್ತುತ 9ನೇ ಮತ್ತು 10ನೇ ತರಗತಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿದೆ. 11ನೇ ತರಗತಿಯಲ್ಲಿ ಅಧ್ಯಯನ ವಿಭಾಗವನ್ನು ಆರಿಸಿಕೊಳ್ಳುವಾಗ ವಿವಿಧ ಆಯ್ಕೆಗಳ ಅನ್ವೇಷಣೆಗೈಯಲು ವಿದ್ಯಾರ್ಥಿಗಳಿಗೆ ಇದು ನಿರ್ಣಾಯಕ ಸಮಯವಾಗಿದೆ.
ಮಾರ್ಗ್ ವೃತ್ತಿ ಮೌಲ್ಯಮಾಪನ ಕಾರ್ಯಕ್ರಮ ಪಡೆದುಕೊಳ್ಳಲು ಶುಲ್ಕಗಳು ಎಷ್ಟಾಗುತ್ತವೆ?
ಶಾಲೆಯ ಅಗತ್ಯತೆಗಳಿಗೆ ತಕ್ಕಂತೆ ವೃತ್ತಿ ಮಾರ್ಗದರ್ಶನ ಪರೀಕ್ಷೆಯನ್ನು ನಾವು ಕಸ್ಟಮೈಝ್ ಮಾಡುತ್ತೇವೆ. ಹಾಗಾಗಿ ವೆಚ್ಚವು ನೀವು ಬಯಸುವ ಉತ್ಪನ್ನ ವೈಶಿಷ್ಟ್ಯಗಳ ಆಧಾರದಲ್ಲಿ ವ್ಯತ್ಯಾಸವಾಗಲಿದೆ.


Explore career options through our blogs