ವೃತ್ತಿಯ ಕಿರುಪಟ್ಟಿ ಮಾಡಿ
ನಿಮ್ಮ ಕೆಲಸವನ್ನು ಆನಂದಿಸಿ
ಯಶಸ್ವಿಯಾಗಿ

ಪರೀಕ್ಷೆಯ ವಿವರಗಳು

 • • ವಿಭಾಗಗಳು: 4
 • • ಅವಧಿ: 2.5 ಗಂಟೆಗಳು
 • • ಭಾಷೆಯ ಆಯ್ಕೆ: ಇಂಗ್ಲಿಷ್/ ಕನ್ನಡ
 • • ಶುಲ್ಕ: ರೂ.1000 + ತೆರಿಗೆಗಳು

ಯಾವುದರ ಮೇಲೆ ನಿಮ್ಮನ್ನು ಪರೀಕ್ಷಿಸಲಾಗುತ್ತದೆ

 • • ವಿಷಯ ಆಧಾರಿತ ಪರೀಕ್ಷೆ
 • • ಯೋಗ್ಯತಾ ಪರೀಕ್ಷೆ
 • • ವೃತ್ತಿ ಆಸಕ್ತಿ ಪರೀಕ್ಷೆ
 • • ವ್ಯಕ್ತಿತ್ವ ಪರೀಕ್ಷೆ

ನಿಮ್ಮ ವರದಿ

 • • ಪ್ರತಿ ವಿಭಾಗದ ವಿಶ್ಲೇಷಣೆಯನ್ನು ತೋರಿಸುವ ಕಸ್ಟಮೈಝ್
 • • ನಿಮ್ಮ ಆಸಕ್ತಿ ಮತ್ತು ಕೌಶಲ್ಯಗಳ ಆಧಾರದಲ್ಲಿ
  ನಿಮಗೆ ಅತ್ಯುತ್ತಮವಾಗಿ ಸೂಕ್ತವಾಗುವ 3 ವೃತ್ತಿ ಆಯ್ಕೆಗಳು


ವಿಷಯ ಪರೀಕ್ಷೆ:

ಈ ವಿಭಾಗವು ನೀವು ಶಾಲೆಯಲ್ಲಿ ಈ ತನಕ ಏನನ್ನು ಕಲಿತಿದ್ದೀರೋ ಅದನ್ನು ಪರೀಕ್ಷಿಸಲಿದೆ. ಈ ವಿಭಾಗದ ಫಲಿತಾಂಶಗಳು ನೀವು ಆಸಕ್ತಿ ಹೊಂದಿರುವ ನಿರ್ದಿಷ್ಟ ಕ್ಷೇತ್ರದಲ್ಲಿ ವೃತ್ತಿಯನ್ನು ಮುಂದುವರಿಸಲು ಯಾವ ವಿಷಯಗಳ ಮೇಲೆ ನೀವು ಗಮನ ಕೇಂದ್ರೀಕರಿಸಬೇಕು ಎಂಬ ಕುರಿತು ಒಳನೋಟವನ್ನು ಒದಗಿಸುತ್ತದೆ.

ಯೋಗ್ಯತಾ ಪರೀಕ್ಷೆ:

ಯೋಗ್ಯತಾ ಪರೀಕ್ಷೆ ಫಲಿತಾಂಶಗಳು ನೀವು ಸಹಜವಾಗಿ ಯಾವುದರಲ್ಲಿ ಉತ್ತಮರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ. ನೀವು ಸಹಜವಾಗಿ ಉತ್ತಮರಾಗಿರುವ ಕೌಶಲ್ಯಗಳನ್ನು ಉಪಯೋಗಿಸಬೇಕಾಗುವ ವೃತ್ತಿ ಆಯ್ಕೆಗಳತ್ತ ನೀವು ನೋಡಬಹುದಾಗಿದೆ.

ಆಸಕ್ತಿಯ ಪರೀಕ್ಷೆ:

ನಿರ್ದಿಷ್ಟ ವಿಧದ ಉದ್ಯೋಗಗಳು/ ಕೆಲಸ ನಿಮಗೆ ಸಹಜವಾಗಿ ಆಕರ್ಷಕವಾಗಬಹುದು. ಈ ಪರೀಕ್ಷೆಯು ನೀವು ಅತ್ಯಂತ ಆನಂದಿಸಬಹುದಾದ ಚಟುವಟಿಕೆಗಳನ್ನು ಕಿರುಪಟ್ಟಿ ಮಾಡುತ್ತದೆ.

ವ್ಯಕ್ತಿತ್ವ ಪರೀಕ್ಷೆ:

ಹೈಸ್ಕೂಲ್‌ನಲ್ಲಿ ನಿಮ್ಮ ವ್ಯಕ್ತಿತ್ವ ರೂಪುಗೊಳ್ಳತದೆಯಷ್ಟೆ. ನಿಮ್ಮ ಜೀವನಾನುಭವದೊಂದಿಗೆ ನಿಮ್ಮ ವ್ಯಕ್ತಿತ್ವ ಬದಲಾಗಬಹುದು. ನಿಮಗೆ ಉನ್ನತ ಉದ್ಯೋಗ ತೃಪ್ತಿ ನೀಡುವ ವೃತ್ತಿ ಆಯ್ಕೆಗಳನ್ನು ಗುರುತಿಸಲು ನೀವು ಈ ಫಲಿತಾಂಶವನ್ನು ಉಪಯೋಗಿಸಬಹುದು.ಇದು ಮುಖ್ಯವೇ?


"ಹೌದು, ಈ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಮುಖ್ಯ. ಆಗ ನಿಮ್ಮ ಕೌಶಲ್ಯಗಳು ಮತ್ತು ಆಸಕ್ತಿಯ ಆಧಾರದಲ್ಲಿ ನಿಮಗೆ ಅತ್ಯುತ್ತಮವಾಗಿ ಸೂಕ್ತವಾಗುವ ವೃತ್ತಿ ಆಯ್ಕೆಗಳತ್ತ ನಿಮಗೆ ದೃಷ್ಟಿ ಹರಿಸಲು ಇದು ನಿಮಗೆ ನೆರವಾಗುತ್ತದೆ.
ಹೇಗೆ? ಈ ಪರೀಕ್ಷೆಯು ನಿಮ್ಮ ಕೌಶಲ್ಯಗಳು, ಆಸಕ್ತಿಗಳು, ನಿರಾಸಕ್ತಿಗಳು ಮತ್ತು ಜ್ಞಾನ ಮಟ್ಟದ ಆಧಾರದಲ್ಲಿ ಅತ್ಯುತ್ತಮವಾದ ಅಧ್ಯಯನ ಹಾಗೂ ವೃತ್ತಿ ಆಯ್ಕೆಗಳನ್ನು ನಿಮಗೆ ಒದಗಿಸುತ್ತದೆ."

ಪರೀಕ್ಷೆಯ ಅವಧಿ ಎಷ್ಟು? ನಾನು ಒಂದೇ ಬಾರಿಗೆ ಇದನ್ನು ಬರೆಯಬೇಕೇ ಅಥವಾ ಬೇರೆ ಬೇರೆ ದಿನಗಳಲ್ಲಿ ನಾನು ಬರೆಯಬಹುದೇ?
ಈ ಪರೀಕ್ಷೆಯನ್ನು ಪೂರ್ತಿಗೊಳಿಸಲು ಒಟ್ಟಾರೆ 2.5 ಗಂಟೆಗಳು ತಗಲುತ್ತವೆ. ಒಂದೇ ದಿನದಲ್ಲಿ ನೀವು ಈ ಪರೀಕ್ಷೆ ಪೂರ್ಣಗೊಳಿಸಬೇಕೆಂದು ನಾವು ಹೇಳುತ್ತೇವೆ. ಆದಾಗ್ಯೂ, ನೀವು ಬಯಸುವ ಯಾವುದೇ ವೇಳೆಯಲ್ಲಿ ಪ್ರತಿ ವಿಭಾಗಗಳನ್ನು ಬರೆಯುವ ಅವಕಾಶವನ್ನು ನೀವು ಹೊಂದಿರುತ್ತೀರಿ. ನೀವು ವಿರಾಮ ತೆಗೆದುಕೊಂಡು ವಿವಿಧ ದಿನಗಳಂದು ಪ್ರತಿ ವಿಭಾಗವನ್ನು ಬರೆಯಬಹುದು. ಪ್ರತಿ ವಿಭಾಗವನ್ನು ನೀವು ಸಲ್ಲಿಸಿದ ನಂತರ, ಉತ್ತರಗಳು ಉಳಿಸಲ್ಪಡುತ್ತವೆ, ಹಾಗಾಗಿ ಅದೇ ವಿಭಾಗವನ್ನು ಮತ್ತೊಮ್ಮೆ ನೀವು ಬರೆಯಬೇಕಾಗಿಲ್ಲ. ಆದಾಗ್ಯೂ, ನಿಮ್ಮ ಪೂರ್ಣ ವರದಿ ಪಡೆಯಲು ನೀವು ಆ ಪರೀಕ್ಷೆ ಪೂರ್ಣಗೊಳಿಸಬೇಕಾಗುತ್ತದೆ.
ಪರೀಕ್ಷೆಗಾಗಿ ನಾನು ನೋಂದಣಿ ಮಾಡುವುದು ಹಾಗೂ ಪಾವತಿ ಮಾಡುವುದು ಹೇಗೆ?

ವಿದ್ಯಾರ್ಥಿಗಳು ಡೆಬಿಟ್ /ಕ್ರೆಡಿಟ್ ಕಾರ್ಡ್‌ಗಳು/ ನೆಟ್‌ಬ್ಯಾಂಕಿಂಗ್ ಉಪಯೋಗಿಸಿಕೊಂಡು ಆನ್‌ಲೈನ್‌ನಲ್ಲಿ ಪಾವತಿ ಮಾಡಬಹುದು.
ಈ ಪರೀಕ್ಷೆ ಬರೆಯುವ ಮುನ್ನ ನಾನು ತಯಾರಿ ನಡೆಸಬೇಕಾಗುತ್ತದೆಯೇ?

ಈ ಪರೀಕ್ಷೆ ಬರೆಯಲು ಯಾವುದೇ ಸಿದ್ಧತೆ ಬೇಕಾಗಿಲ್ಲ. ಈ ಪರೀಕ್ಷೆಯು ನಿಮ್ಮ ಪ್ರಸ್ತುತ ಜ್ಞಾನ ಮಟ್ಟ, ಆಸಕ್ತಿ, ಸಹಜ ಸಾಮರ್ಥ್ಯಗಳು ಮತ್ತು ವ್ಯಕ್ತಿತ್ವವನ್ನು ವಿಶ್ಲೇಷಿಸಲು ವಿನ್ಯಾಸಗೊಳಿಸಲಾಗಿದೆ.
ಈ ಪರೀಕ್ಷೆಯ ಪ್ರತಿ ವಿಭಾಗ ಪ್ರಾಮುಖ್ಯವೇ ಅಥವಾ ನಾನು ಈ ಪರೀಕ್ಷೆಯ ಕೆಲವು ವಿಭಾಗಗಳನ್ನು ಬಿಟ್ಟು ಬಿಡಬಹುದೇ?
ಈ ಪರೀಕ್ಷೆಯ ಎಲ್ಲಾ ವಿಭಾಗಗಳನ್ನು ಬರೆಯುವುದು ಮುಖ್ಯವಾಗಿದೆ. ಈ ಪರೀಕ್ಷೆಯನ್ನು ಗಂಭೀರವಾಗಿ ಬರೆಯುವ ವಿದ್ಯಾರ್ಥಿಗಳು ಹೆಚ್ಚು ನಿಖರ ಫಲಿತಾಂಶಗಳನ್ನು ಕಂಡುಕೊಳ್ಳುವ ಸಾಧ್ಯತೆಯಿರುತ್ತದೆ ಮತ್ತು ಅವರ ಆಸಕ್ತಿ ಮತ್ತು ಸಾಮರ್ಥ್ಯಗಳಿಗೆ ಸರಿ ಹೊಂದುತ್ತವೆ.


Explore career options through our blogs