ವಿದ್ಯಾರ್ಥಿಗಳಿಗೆ

ಪರೀಕ್ಷೆಯ ಅವಧಿ ಎಷ್ಟು? ನಾನು ಒಂದೇ ಬಾರಿಗೆ ಇದನ್ನು ಬರೆಯಬೇಕೇ ಅಥವಾ ಬೇರೆ ಬೇರೆ ದಿನಗಳಲ್ಲಿ ನಾನು ಬರೆಯಬಹುದೇ?
ಈ ಪರೀಕ್ಷೆಯನ್ನು ಪೂರ್ತಿಗೊಳಿಸಲು ಒಟ್ಟಾರೆ 2.5 ಗಂಟೆಗಳು ತಗಲುತ್ತವೆ. ಒಂದೇ ದಿನದಲ್ಲಿ ನೀವು ಈ ಪರೀಕ್ಷೆ ಪೂರ್ಣಗೊಳಿಸಬೇಕೆಂದು ನಾವು ಹೇಳುತ್ತೇವೆ. ಆದಾಗ್ಯೂ, ನೀವು ಬಯಸುವ ಯಾವುದೇ ವೇಳೆಯಲ್ಲಿ ಪ್ರತಿ ವಿಭಾಗಗಳನ್ನು ಬರೆಯುವ ಅವಕಾಶವನ್ನು ನೀವು ಹೊಂದಿರುತ್ತೀರಿ. ನೀವು ವಿರಾಮ ತೆಗೆದುಕೊಂಡು ವಿವಿಧ ದಿನಗಳಂದು ಪ್ರತಿ ವಿಭಾಗವನ್ನು ಬರೆಯಬಹುದು. ಪ್ರತಿ ವಿಭಾಗವನ್ನು ನೀವು ಸಲ್ಲಿಸಿದ ನಂತರ, ಉತ್ತರಗಳು ಉಳಿಸಲ್ಪಡುತ್ತವೆ, ಹಾಗಾಗಿ ಅದೇ ವಿಭಾಗವನ್ನು ಮತ್ತೊಮ್ಮೆ ನೀವು ಬರೆಯಬೇಕಾಗಿಲ್ಲ. ಆದಾಗ್ಯೂ, ನಿಮ್ಮ ಪೂರ್ಣ ವರದಿ ಪಡೆಯಲು ನೀವು ಆ ಪರೀಕ್ಷೆ ಪೂರ್ಣಗೊಳಿಸಬೇಕಾಗುತ್ತದೆ.
ಈ ಪರೀಕ್ಷೆಗಾಗಿ ನಾನು ನೋಂದಣಿ ಮಾಡುವುದು ಹಾಗೂ ಪಾವತಿ ಮಾಡುವುದು ಹೇಗೆ?

ವಿದ್ಯಾರ್ಥಿಗಳು ಡೆಬಿಟ್ /ಕ್ರೆಡಿಟ್ ಕಾರ್ಡ್‌ಗಳು/ ನೆಟ್‌ಬ್ಯಾಂಕಿಂಗ್ ಉಪಯೋಗಿಸಿಕೊಂಡು ಆನ್‌ಲೈನ್‌ನಲ್ಲಿ ಪಾವತಿ ಮಾಡಬಹುದು.
ಈ ಪರೀಕ್ಷೆ ಬರೆಯುವ ಮುನ್ನ ನಾನು ತಯಾರಿ ನಡೆಸಬೇಕಾಗುತ್ತದೆಯೇ?

ಈ ಪರೀಕ್ಷೆ ಬರೆಯಲು ಯಾವುದೇ ಸಿದ್ಧತೆ ಬೇಕಾಗಿಲ್ಲ. ಈ ಪರೀಕ್ಷೆಯು ನಿಮ್ಮ ಪ್ರಸ್ತುತ ಜ್ಞಾನ ಮಟ್ಟ, ಆಸಕ್ತಿ, ಸಹಜ ಸಾಮರ್ಥ್ಯಗಳು ಮತ್ತು ವ್ಯಕ್ತಿತ್ವವನ್ನು ವಿಶ್ಲೇಷಿಸಲು ವಿನ್ಯಾಸಗೊಳಿಸಲಾಗಿದೆ.
ಈ ಪರೀಕ್ಷೆಯ ಪ್ರತಿ ವಿಭಾಗ ಪ್ರಾಮುಖ್ಯವೇ ಅಥವಾ ನಾನು ಈ ಪರೀಕ್ಷೆಯ ಕೆಲವು ವಿಭಾಗಗಳನ್ನು ಬಿಟ್ಟು ಬಿಡಬಹುದೇ?
ಈ ಪರೀಕ್ಷೆಯ ಎಲ್ಲಾ ವಿಭಾಗಗಳನ್ನು ಬರೆಯುವುದು ಮುಖ್ಯವಾಗಿದೆ. ಈ ಪರೀಕ್ಷೆಯನ್ನು ಗಂಭೀರವಾಗಿ ಬರೆಯುವ ವಿದ್ಯಾರ್ಥಿಗಳು ಹೆಚ್ಚು ನಿಖರ ಫಲಿತಾಂಶಗಳನ್ನು ಕಂಡುಕೊಳ್ಳುವ ಸಾಧ್ಯತೆಯಿರುತ್ತದೆ ಮತ್ತು ಅವರ ಆಸಕ್ತಿ ಮತ್ತು ಸಾಮರ್ಥ್ಯಗಳಿಗೆ ಸರಿ ಹೊಂದುತ್ತವೆ.ಶಾಲೆಗಳಿಗೆ
ಸಾಮಾನ್ಯವಾಗಿ ಶಾಲೆಗಳು ನಮ್ಮಲ್ಲಿ ಏನು ಕೇಳುತ್ತವೆ?

ಮಾರ್ಗ್‌ನಿಂದ ಪರವಾನಗಿ ಪಡೆದುಕೊಳ್ಳಲು ಪ್ರಕ್ರಿಯೆ ಏನು?

“ಈಗ ನೋಂದಾಯಿಸಿ” ಫಾರಂ ಅನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ನಮ್ಮ ತಂಡದ ಸದಸ್ಯರು ನಿಮ್ಮ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಲು ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ನಮ್ಮೊಂದಿಗಿನ ಸಹಭಾಗಿತ್ವಕ್ಕಾಗಿ ಮುಂದಿನ ಹಂತಗಳನ್ನು ವಿವರಿಸಲಿದ್ದಾರೆ. ನಂತರ ನಾವು ನಿಮ್ಮ ಶಾಲೆಗೆ ಪರೀಕ್ಷೆಯನ್ನು ಕಸ್ಟಮೈಝ್ ಮಾಡಲಿದ್ದೇವೆ ಮತ್ತು ವಿದ್ಯಾರ್ಥಿಗಳು ಹಾಗೂ ಶಾಲೆಯ ಆಡಳಿತಾಧಿಕಾರಿಗಳಿಗೆ ವೈಯಕ್ತಿಕ ಲಾಗಿನ್ ಐಡಿಗಳನ್ನು ರಚಿಸಲಿದ್ದೇವೆ. ನಿಮ್ಮ ಅಗತ್ಯಗಳಿಗೆ ತಕ್ಕಂತೆ ಪರವಾನಗಿಯನ್ನು ನೀವು ಉಪಯೋಗಿಸಬಹುದು.
ಮಾರ್ಗ್ ಪರೀಕ್ಷೆಯ ಅವಧಿ ಎಷ್ಟು?

ಒಬ್ಬ ವಿದ್ಯಾರ್ಥಿ ಸಾಮಾನ್ಯವಾಗಿ ಈ ಪರೀಕ್ಷೆ ಪೂರ್ಣಗೊಳಿಸಲು 2.5 ಗಂಟೆಗಳನ್ನು ತೆಗೆದುಕೊಳ್ಳುತ್ತಾನೆ. ವಿದ್ಯಾರ್ಥಿಯು ಸಾಮಾನ್ಯವಾಗಿ ಅದೇ ದಿನ ತನ್ನ ಕಸ್ಟಮೈಝ್ ಆದ ವರದಿಯನ್ನು ಪಡೆಯುತ್ತಾನೆ/ಳೆ.
ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತಾಧಿಕಾರಿಗೆ ಯಾವಾಗ ಪರೀಕ್ಷಾ ವರದಿ ಲಭ್ಯವಾಗುತ್ತದೆ?
ವಿದ್ಯಾರ್ಥಿಯು ಪರೀಕ್ಷೆಯನ್ನು ಪೂರ್ತಿಗೊಳಿಸಿದ ದಿನವೇ ವಿದ್ಯಾರ್ಥಿ ಹಾಗೂ ಶಾಲಾ ಅಧಿಕಾರಿಗಳು ಕಸ್ಟಮೈಝ್ ಆದ ವರದಿಯನ್ನು ಪಡೆಯುತ್ತಾರೆ. ಪರೀಕ್ಷೆಯ ದಿನಾಂಕದಿಂದ 6 ತಿಂಗಳ ತನಕ ವಿದ್ಯಾರ್ಥಿ ಹಾಗೂ ಶಾಲಾ ಕೌನ್ಸೆಲರ್‌ಗೆ ವೃತ್ತಿ ಮಾರ್ಗದರ್ಶನ ವರದಿ ಲಭ್ಯವಿರುತ್ತದೆ. ಪರವಾನಗಿಯನ್ನು ಖರೀದಿಸುವ ವೇಳೆಯಲ್ಲಿ ಯಾವುದೇ ನಿರ್ದಿಷ್ಟ ಅಗತ್ಯತೆಗಳನ್ನು ನೀವು ನಮ್ಮ ಬಳಿ ಹೇಳಬಹುದು.
ಈ ಕಾರ್ಯಕ್ರಮವು ಯಾವ ತರಗತಿಗಳನ್ನು ಉದ್ದೇಶವಾಗಿರಿಸಿಕೊಂಡಿದೆ?

ಈ ಮಾರ್ಗ್ ಪರೀಕ್ಷೆಯು ಪ್ರಸ್ತುತ 9ನೇ ಮತ್ತು 10ನೇ ತರಗತಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿದೆ. 11ನೇ ತರಗತಿಯಲ್ಲಿ ಅಧ್ಯಯನ ವಿಭಾಗವನ್ನು ಆರಿಸಿಕೊಳ್ಳುವಾಗ ವಿವಿಧ ಆಯ್ಕೆಗಳ ಅನ್ವೇಷಣೆಗೈಯಲು ವಿದ್ಯಾರ್ಥಿಗಳಿಗೆ ಇದು ನಿರ್ಣಾಯಕ ಸಮಯವಾಗಿದೆ.
ಮಾರ್ಗ್ ವೃತ್ತಿ ಮೌಲ್ಯಮಾಪನ ಕಾರ್ಯಕ್ರಮ ಪಡೆದುಕೊಳ್ಳಲು ಶುಲ್ಕಗಳು ಎಷ್ಟಾಗುತ್ತವೆ?
ಶಾಲೆಯ ಅಗತ್ಯತೆಗಳಿಗೆ ತಕ್ಕಂತೆ ವೃತ್ತಿ ಮಾರ್ಗದರ್ಶನ ಪರೀಕ್ಷೆಯನ್ನು ನಾವು ಕಸ್ಟಮೈಝ್ ಮಾಡುತ್ತೇವೆ. ಹಾಗಾಗಿ ವೆಚ್ಚವು ನೀವು ಬಯಸುವ ಉತ್ಪನ್ನ ವೈಶಿಷ್ಟ್ಯಗಳ ಆಧಾರದಲ್ಲಿ ವ್ಯತ್ಯಾಸವಾಗಲಿದೆ.ಶಾಲೆಗಳಿಗೆ
ಕೌನ್ಸೆಲರ್‌ಗಳು ಸಾಮಾನ್ಯಾಗಿ ನಮ್ಮಲ್ಲಿ ಏನು ಕೇಳುತ್ತಾರೆ?

ಮಾರ್ಗ್‌ನಿಂದ ಪರವಾನಗಿ /ಲಾಗಿನ್ ಪಡೆದುಕೊಳ್ಳಲು ಪ್ರಕ್ರಿಯೆ ಏನು?

“ಈಗ ನೋಂದಾಯಿಸಿ” ಫಾರಂ ಅನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ನಮ್ಮ ತಂಡದ ಸದಸ್ಯರು ನಿಮ್ಮ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಲು ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ನಮ್ಮೊಂದಿಗಿನ ಸಹಭಾಗಿತ್ವಕ್ಕಾಗಿ ಮುಂದಿನ ಹಂತಗಳನ್ನು ವಿವರಿಸಲಿದ್ದಾರೆ. ನಂತರ ನಾವು ನಿಮ್ಮ ಅಗತ್ಯಗಳಿಗೆ ತಕ್ಕಂತೆ ಪರೀಕ್ಷೆಯನ್ನು ಕಸ್ಟಮೈಝ್ ಮಾಡಲಿದ್ದೇವೆ ಮತ್ತು ನೀವು ಮತ್ತು ನಿಮ್ಮ ತಂಡಕ್ಕೆ ವೈಯಕ್ತಿಕ ಲಾಗಿನ್ ಐಡಿಗಳನ್ನು ರಚಿಸಲಿದ್ದೇವೆ. ನಿಮ್ಮ ಅಗತ್ಯಗಳಿಗೆ ತಕ್ಕಂತೆ ಪರವಾನಗಿ /ಲಾಗಿನ್‌ಗಳನ್ನು ನೀವು ಉಪಯೋಗಿಸಬಹುದು.
ಮಾರ್ಗ್ ಪರೀಕ್ಷೆಯ ಅವಧಿ ಎಷ್ಟು?

ಒಬ್ಬ ವಿದ್ಯಾರ್ಥಿ ಸಾಮಾನ್ಯವಾಗಿ ಈ ಪರೀಕ್ಷೆ ಪೂರ್ಣಗೊಳಿಸಲು 2.5 ಗಂಟೆಗಳನ್ನು ತೆಗೆದುಕೊಳ್ಳುತ್ತಾನೆ. ವಿದ್ಯಾರ್ಥಿ/ ಕೌನ್ಸೆಲರ್ ಸಾಮಾನ್ಯವಾಗಿ ಅದೇ ದಿನ ತನ್ನ ಕಸ್ಟಮೈಝ್ ಆದ ವರದಿಯನ್ನು ಪಡೆಯುತ್ತಾರೆ.
ವಿದ್ಯಾರ್ಥಿಗಳು ಹಾಗೂ ಕೌನ್ಸೆಲರ್‌ಗೆ ಯಾವಾಗ ಪರೀಕ್ಷಾ ವರದಿ ಲಭ್ಯವಾಗುತ್ತದೆ?
ವಿದ್ಯಾರ್ಥಿಯು ಪರೀಕ್ಷೆಯನ್ನು ಪೂರ್ತಿಗೊಳಿಸಿದ ದಿನವೇ ವಿದ್ಯಾರ್ಥಿ ಹಾಗೂ ಕೌನ್ಸೆಲರ್ ಕಸ್ಟಮೈಝ್ ಆದ ವರದಿಯನ್ನು ಪಡೆಯುತ್ತಾರೆ. ಪರೀಕ್ಷೆಯ ದಿನಾಂಕದಿಂದ 6 ತಿಂಗಳ ತನಕ ವಿದ್ಯಾರ್ಥಿ ಹಾಗೂ ವೃತ್ತಿ ಕೌನ್ಸೆಲರ್‌ಗೆ ವೃತ್ತಿ ಮಾರ್ಗದರ್ಶನ ವರದಿ ಲಭ್ಯವಿರುತ್ತದೆ. ಪರವಾನಗಿಯನ್ನು ಖರೀದಿಸುವ ವೇಳೆಯಲ್ಲಿ ಯಾವುದೇ ನಿರ್ದಿಷ್ಟ ಅಗತ್ಯತೆಗಳನ್ನು ನೀವು ನಮ್ಮ ಬಳಿ ಹೇಳಬಹುದು.
ಈ ಕಾರ್ಯಕ್ರಮವು ಯಾವ ತರಗತಿಗಳು/ ವಯಸ್ಸಿನ ಗುಂಪುಗಳನ್ನು ಉದ್ದೇಶವಾಗಿರಿಸಿಕೊಂಡಿದೆ?

ಈ ಮಾರ್ಗ್ ಪರೀಕ್ಷೆಯು ಪ್ರಸ್ತುತ 9ನೇ ಮತ್ತು 10ನೇ ತರಗತಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿದೆ. 11ನೇ ತರಗತಿಯಲ್ಲಿ ಅಧ್ಯಯನ ವಿಭಾಗವನ್ನು ಆರಿಸಿಕೊಳ್ಳುವಾಗ ವಿವಿಧ ಆಯ್ಕೆಗಳ ಅನ್ವೇಷಣೆಗೈಯಲು ವಿದ್ಯಾರ್ಥಿಗಳಿಗೆ ಇದು ನಿರ್ಣಾಯಕ ಸಮಯವಾಗಿದೆ.
ಮಾರ್ಗ್ ವೃತ್ತಿ ಮೌಲ್ಯಮಾಪನ ಕಾರ್ಯಕ್ರಮ ಪಡೆದುಕೊಳ್ಳಲು ಶುಲ್ಕಗಳು ಎಷ್ಟಾಗುತ್ತವೆ?
ಕೌನ್ಸೆಲರ್‌ನ ಅಗತ್ಯತೆಗಳಿಗೆ ತಕ್ಕಂತೆ ವೃತ್ತಿ ಮಾರ್ಗದರ್ಶನ ಪರೀಕ್ಷೆಯನ್ನು ನಾವು ಕಸ್ಟಮೈಝ್ ಮಾಡುತ್ತೇವೆ. ಹಾಗಾಗಿ ವೆಚ್ಚವು ನೀವು ಬಯಸುವ ಉತ್ಪನ್ನ ವೈಶಿಷ್ಟ್ಯಗಳ ಆಧಾರದಲ್ಲಿ ವ್ಯತ್ಯಾಸವಾಗಲಿದೆ.