ತಜ್ಞರ ಸಮಿತಿಕು. ಅನುರಾಧಾ ಪ್ರಭುದೇಸಾಯಿ,
ಕೌನ್ಸೆಲಿಂಗ್ ಮನಃಶಾಸ್ತ್ರಜ್ಞೆ ಮತ್ತು ಎಂಬಿಟಿಐ ವೃತ್ತಿನಿರತೆ,


ಅನುರಾಧಾ ಅವರು ಔದ್ಯೋಗಿಕ ಮಾರ್ಗದರ್ಶನ ಮತ್ತು ವೃತ್ತಿ ಸಮಾಲೋಚನೆಯಲ್ಲಿ ವಿಶೇಷಜ್ಞೆಯಾಗಿದ್ದಾರೆ ಮತ್ತು ಇವರು ವಿವಿಧ ಕೋರ್ಸ್‌ಗಳು, ಕಾಲೇಜುಗಳು ಮತ್ತು ವೃತ್ತಿ ಆಯ್ಕೆಗಳ ಕುರಿತ ನಡೆದಾಡುವ ವಿಶ್ವಕೋಶವಾಗಿದ್ದಾರೆ. ನಿಯತ ವೃತ್ತಿ ಮಾರ್ಗದರ್ಶನದೊಂದಿಗೆ, ಇವರು ಕಲಿಕಾ ನ್ಯೂನ್ಯತೆ ಹಾಗೂ ಬೌದ್ಧಿಕ ಕೊರತೆಯುಳ್ಳ ವಿದ್ಯಾರ್ಥಿಗಳಿಗಾಗಿ ವಿಶೇಷ ವೃತ್ತಿ ಮಾರ್ಗದರ್ಶನ ಮಾಡ್ಯೂಲ್‌ಗಳನ್ನು ಕೂಡಾ ಅಭಿವೃದ್ಧಿಪಡಿಸಿದ್ದಾರೆ.ಕು.ಶೀತಲ್ ರವಿ,
ಕೌನ್ಸಿಲಿಂಗ್ ಮನಃಶಾಸ್ತ್ರಜ್ಞೆ


ಒಬ್ಬ ಮನಃಶಾಸ್ತ್ರಜ್ಞೆಯಾಗಿ, ಶೀತಲ್ ಅವರ ಸಾಮರ್ಥ್ಯವು ವ್ಯಕ್ತಿತ್ವ ವಿಶ್ಲೇಷಣೆಗಳು, ಮನೋಮಾಪನದ ಮೌಲ್ಯಮಾಪನಗಳು, ವೈಯಕ್ತಿಕ ಕೌನ್ಸಿಲಿಂಗ್ ಮತ್ತು ಥೆರಪಿಯಲ್ಲಿದೆ. ಅವರು ಮಗು ಮತ್ತು ಹರೆಯದ ಮಾನಸಿಕ ಚಿಕಿತ್ಸೆಯಲ್ಲಿ ಗಣನೀಯ ಅನುಭವ ಹೊಂದಿದ್ದಾರೆ. ಅವರು ಭಕ್ತಿವೇದಾಂತ ಸ್ವಾಮಿ ಮಿಶನ್ ಶಾಲೆಯಲ್ಲಿ ಕೂಡಾ ಮುಖ್ಯ ಮನಃಶಾಸ್ತ್ರಜ್ಞೆಯಾಗಿದ್ದಾರೆ ಮತ್ತು ಕಳೆದ 18 ವರ್ಷಗಳಿಂದ ಶಾಲೆಯಲ್ಲಿ ಅಂತರ್ಗತ ಶಿಕ್ಷಣ ಮತ್ತು ಕೌನ್ಸೆಲಿಂಗ್‌ನ ನೇತೃತ್ವ ವಹಿಸಿದ್ದಾರೆ ಮತ್ತು ನಿರ್ವಹಿಸುತ್ತಿದ್ದಾರೆ.ಕು. ಸಮಿಂದರಾ ಸಾವಂತ್,
ವೈದ್ಯಕೀಯ ಮನಃಶಾಸ್ತ್ರ


ಸಮಿಂದರಾ ಅವರು ಮಾನಸಿಕ ರೋಗನಿರ್ಣಯ ಮತ್ತು ವೈದ್ಯಕೀಯ ವಿಶ್ಲೇಷಣೆಗಳಲ್ಲಿ ವಿಶೇಷಜ್ಞರಾಗಿದ್ದಾರೆ ಮತ್ತು ಮಗು, ಹರೆಯ, ವಿವಾಹ ಹಾಗೂ ಕುಟುಂಬದ ಮಾನಸಿಕ ಚಿಕಿತ್ಸೆಯಲ್ಲಿ ಗಣನೀಯ ಅನುಭವ ಹೊಂದಿದ್ದಾರೆ. ಸಮಿಂದರಾ ಅವರು ಕಾರ್ಯಾಗಾರಗಳನ್ನು ನಡೆಸುವುದು ಹಾಗೂ ತರಬೇತಿ ನೀಡುವಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ ಹಾಗೂ ವಿದ್ಯಾರ್ಥಿಗಳು, ಪೋಷಕರು, ಉದ್ಯೋಗಿಗಳು, ಶಿಕ್ಷಕರು ಇತ್ಯಾದಿ ಜನಸಮೂಹದೊಂದಿಗೆ ಕೆಲಸ ಮಾಡಿದ್ದಾರೆ. ಅವರು ಸಾಮರ್ಥ್ಯ ಗುರುತಿಸುವಿಕೆ, ವಿಶ್ಲೇಷಣೆ ಮತ್ತು ಅಭಿವೃದ್ಧಿ ಕೇಂದ್ರಗಳು, ಕಾರ್ಯನಿರ್ವಾಹದ ನಿರ್ವಹಣೆ, ಸಾಮರ್ಥ್ಯ ಅಭಿವೃದ್ಧಿ, ಮನೋಮಾಪನ ಪರೀಕ್ಷಾ ಅಭಿವೃದ್ಧಿ ಇತ್ಯಾದಿಯಲ್ಲಿ ಕೂಡಾ ಅನುಭವ ಹೊಂದಿದ್ದಾರೆ.ಕು.ರಾಧಿಕಾ ಕುಲಕರ್ಣಿ,
ಕೌನ್ಸಿಲಿಂಗ್ ಮನಃಶಾಸ್ತ್ರಜ್ಞೆ


ರಾಧಿಕಾ ಅವರು ಕೌನ್ಸಿಲಿಂಗ್ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರಿಗೆ ಮನೋಮಾಪನ ಮೌಲ್ಯಮಾಪನಗಳು- ವಿಶ್ಲೇಷಣೆಗಳು, ವೃತ್ತಿ ಮಾರ್ಗದರ್ಶನ ಹಾಗೂ ಸಮಾಲೋಚನೆಯನ್ನು ಒಟ್ಟುಗೂಡಿಸುವತ್ತ ಅತೀವ ಇಚ್ಛೆಯಿದ್ದು, ಮಕ್ಕಳು ಮತ್ತು ಶಿಕ್ಷಣದತ್ತ ಪ್ರೀತಿ ಹೊಂದಿದ್ದಾರೆ. ನಿರಂತರ ಕಲಿಕೆ ಮತ್ತು ಬದ್ಧತೆಯ ಮೂಲಕ ತಮ್ಮ ಬಲವನ್ನು ವಿಸ್ತಾರಗೊಳಿಸಲು ಅವರು ಶ್ರಮಿಸುತ್ತಿದ್ದಾರೆ.

ಸಲಹೆಗಾರರುಶ್ರೀ ಎಸ್‌ವಿ ರಂಗನಾಥ್ ಐಎಎಸ್,
ಮಾರ್ಗದರ್ಶಿ


ಶ್ರೀ ಎಸ್.ವಿ.ರಂಗನಾಥ್ ಅವರು ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ. ಇವರು ಐಎಫ್‌ಸಿಐನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದಾರೆ.

ಶ್ರೀ ರಂಗನಾಥ್ ಅವರು ಐಎಎಸ್ (ಕರ್ನಾಟಕ-75) ಕೆಡರ್‌ಗೆ ಸೇರಿದವರು. ಇವರು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರವೆರಡರಲ್ಲೂ ವಿವಿಧ ಹುದ್ದೆಗಳಲ್ಲಿ ನಾಗರಿಕ ಸೇವೆ ಸಲ್ಲಿಸಿದ್ದರು.

ಇವರು ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷರಾಗಿದ್ದರು, ಭಾರತೀಯ ಹೂಡಿಕೆ ಕೇಂದ್ರ, ಅಬುಧಾಬಿಯಲ್ಲಿ ಸ್ಥಾನಿಕ ನಿರ್ದೇಶಕರಾಗಿದ್ದರು, ಕರ್ನಾಟಕದ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದರು, ಬಾಹ್ಯಾಕಾಶ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರರು ಮತ್ತು ಬಾಹ್ಯಾಕಾಶ ಆಯೋಗ, ಅಣು ಇಂಧನ ಆಯೋಗ ಮತ್ತು ಭೂ ಆಯೋಗದ ಸದಸ್ಯ (ಹಣಕಾಸು)ರಾಗಿಯೂ ಸೇವೆ ಸಲ್ಲಿಸಿದ್ದರು.ಡಾ.ಕೆ.ಆರ್‌ಎಸ್ ಮೂರ್ತಿ,
ಮಾರ್ಗದರ್ಶಿ


ಡಾ.ಕೆ.ಆರ್.ಎಸ್.ಮೂರ್ತಿ ಅವರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಮಾಜಿ ನಿರ್ದೇಶಕರು. ಅವರು ಮ್ಯಾನೇಜ್‌ಮೆಂಟ್ ಶಿಕ್ಷಣದಲ್ಲಿ ಸುಮಾರು ಮೂರು ದಶಕಗಳಿಂದ ಸಕ್ರಿಯರಾಗಿದ್ದಾರೆ. ಇವರು ಮೈಸೂರು ವಿಶ್ವವಿದ್ಯಾಲಯದ ಚಿನ್ನದ ಪದಕ ವಿಜೇತರಾಗಿದ್ದಾರೆ.

ಪ್ರೊಫೆಸರ್ ಮೂರ್ತಿ ಅವರು ಮ್ಯಾನೇಜ್‌ಮೆಂಟ್‌ ಅಧ್ಯಯನ ಕೈಗೊಳ್ಳುವ ಮುನ್ನ ಉದ್ಯಮದಲ್ಲಿ ಒಂದು ದಶಕದ ಕಾಲ ಕಾರ್ಯನಿರ್ವಹಿಸಿದ್ದರು.

ಮೈಸೂರು ವಿಶ್ವವಿದ್ಯಾಲಯದಿಂದ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕ ಇವರು ಸ್ಲೋನ್ ಸ್ಕೂಲ್ ಆಪ್ ಮ್ಯಾನೇಜ್‌ಮೆಂಟ್, ಎಂಐಟಿಯಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು ಅಮೆರಿಕದ ಬೋಸ್ಟನ್‌ನ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ನಲ್ಲಿ ಡಾಕ್ಟರೇಟ್ ಪಡೆದರು ಬಳಿಕ ಇವರು ಉದ್ಯಮ ನೀತಿಯ ಪ್ರೊಫೆಸರ್ ಆಗಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಅಹಮದಾಬಾದ್ ಗೆ ಸೇರಿದರು ಸ್ನಾತಕೋತ್ತರ ಕೋರ್ಸ್ ನಲ್ಲಿ ಪಬ್ಲಿಕ್ ಎಂಟರ್ ಪ್ರೈಸ್ ಮ್ಯಾನೇಜ್ ಮೆಂಟ್ ನಲ್ಲಿ ಎಲೆಕ್ಟೀವ್ಸ್ ಅನ್ನು ಇವರು ಆರಂಭಿಸಿದರು ಅವರು ಐಐಎಂಎನಲ್ಲಿ ಸ್ನಾತಕೋತ್ತರ ಪದವಿ ಕಾರ್ಯನಿರ್ವಾಹ ಅಭಿವೃದ್ಧಿ ಡಾಕ್ಟರಲ್ ಮತ್ತು ಬೋಧಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿಕಲಿಸಿದ್ದಾರೆ .

ಆನಂದ್‌ನ ಇನ್‌ಸ್ಟಿಟ್ಯೂಟ್ ಆಪ್ ರೂರಲ್ ಮ್ಯಾನೇಜ್‌ಮೆಂಟ್‌ ಮೊದಲ ನಿರ್ದೇಶಕರು ಕೂಡಾ ಆಗಿದ್ದರು.ಪ್ರೊಫೆಸರ್ ಸಮೀರ್ ಕುಮಾರ್ ಬ್ರಹ್ಮಾಚಾರಿ,
ಮಾರ್ಗದರ್ಶಿ


ಪ್ರೊಫೆಸರ್ ಸಮೀರ್ ಬ್ರಹ್ಮಾಚಾರಿ ಅವರು ಒಬ್ಬ ಭಾರತೀಯ ಜೀವಭೌತಶಾಸ್ತ್ರಜ್ಞ ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್)ನ ಮಾಜಿ ಮಹಾ ನಿರ್ದೇಶಕರು ಮತ್ತು ಭಾರತ ಸರ್ಕಾರದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ (ಡಿಎಸ್‌ಐಆರ್) ಇಲಾಖೆಯ ಮಾಜಿ ಕಾರ್ಯದರ್ಶಿ. ಇವರು ಇನ್‌ಸ್ಟಿಟ್ಯೂಟ್ ಆಫ್ ಜಿನಾಮಿಕ್ಸ್ ಆಂಡ್ ಇಂಟೆಗ್ರೇಟಿವ್ ಬಯಾಲಜಿ (ಐಜಿಐಬಿ), ನವದೆಹಲಿ, ಭಾರತದ ಸಂಸ್ಥಾಪಕ ನಿರ್ದೇಶಕರು. ಇವರು ಓಪನ್ ಸೋರ್ಸ್ ಫಾರ್ ಡ್ರಗ್ ಡಿಸ್ಕವರಿ (ಒಎಸ್‌ಡಿಡಿ) ಪ್ರಾಜೆಕ್ಟ್‌ನ ಮುಖ್ಯ ಮಾರ್ಗದರ್ಶಿಯಾಗಿದ್ದಾರೆ. ಇವರು ಜೆ ಸಿ ಬೋಸ್ ಫೆಲೋಶಿಪ್ ಅವಾರ್ಡ್, ಡಿಎಸ್‌ಟಿ (2012)ಯನ್ನು ಪಡೆದಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಆಣ್ವಿಕ ಜೀವಭೌತಶಾಸ್ತ್ರದಲ್ಲಿ ಸಂಶೋಧನಾ ಸಹಾಯಕರಾಗಿ ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಇವರು ಆರಂಭಿಸಿದರು, ಬಳಿಕ ಪ್ರೊಫೆಸರ್ ಆದರು. ಬಳಿಕ ಇವರನ್ನು ಸಿಎಸ್‌ಐಆರ್- ಸೆಂಟರ್ ಫಾರ್ ಬಯೋಕೆಮಿಕಲ್ ಟೆಕ್ನಾಲಜಿ (ಸಿಬಿಟಿ)ಯ ನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಯಿತು. ಸಿಬಿಟಿಯ ನಿರ್ದೇಶಕರಾಗಿ ಇವರು ಸಿಎಸ್ಐಆರ್ ಅನ್ನು- ಇನ್‌ಸ್ಟಿಟ್ಯೂಟ್ ಆಫ್ ಜಿನಾಮಿಕ್ಸ್ ಆಂಡ್ ಇಂಟೆಗ್ರೇಟೆಡ್ ಬಯಾಲಜಿ- ಜಿನಾಮಿಕ್ಸ್ ಮತ್ತು ಇನ್‌ಫಾರ್ಮಾಟಿಕ್ಸ್ ಅನ್ನು ಸಂಯೋಜಿಸಿದ ಒಂದು ಸಂಸ್ಥೆಯಾಗಿ ಮರುಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಪ್ರೊಫೆಸರ್ ಅರುಣ್ ನಿಗವೇಕರ್,
ಮಾರ್ಗದರ್ಶಿ


ಪ್ರೊಫೆಸರ್ ಅರುಣ್ ನಿಗವೇಕರ್, ಪ್ರಸಿದ್ಧ ಭೌತಶಾಸ್ತ್ರಜ್ಞ ಮತ್ತು 45 ವರ್ಷಗಳ ಅನುಭವವುಳ್ಳ ಪ್ರಖ್ಯಾತ ಶಿಕ್ಷಣತಜ್ಞರಾಗಿದ್ದಾರೆ. ಉನ್ನತ ಶಿಕ್ಷಣದ ಸೌಕರ್ಯ ಮತ್ತು ಗುಣಮಟ್ಟದ ವರ್ಧನೆ ಮತ್ತು ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣಗೊಳಿಸುವಲ್ಲಿ ತಂತ್ರಜ್ಞಾನದ ಬಳಕೆಯಲ್ಲಿ ಇವರ ಕೊಡುಗೆ ಗಣನೀಯವಾಗಿದೆ. ಉನ್ನತ ಶಿಕ್ಷಣದಲ್ಲಿ ಗುಣಮಟ್ಟದ ಪರಿಕಲ್ಪನೆಯ ಮುಂಚೂಣಿಯಲ್ಲಿದ್ದು ಹೊಸ ಹಾದಿ ತುಳಿದವರಲ್ಲೊಬ್ಬರಾಗಿದ್ದಾರೆ. ಈ ಕಾರಣಕ್ಕಾಗಿ ಇವರು ಭಾರತದಲ್ಲಿನ ಉನ್ನತ ಶಿಕ್ಷಣದ ಗುಣಮಟ್ಟದ ಆಂದೋಲನದ ಪಿತಾಮಹ ಎಂದು ಸ್ವತಃ ಮಾಜಿ ರಾಷ್ಟ್ರಪತಿ, ಗೌರವಾನ್ವಿತ ಡಾ.ಎಪಿಜೆ ಅಬ್ದುಲ್ ಕಲಾಂ ಅವರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

2000 ಮತ್ತು 2005ರ ನಡುವೆ ಯುಜಿಸಿಯ ಅಧ್ಯಕ್ಷರು ಹಾಗೂ ಕುಲಪತಿಗಳಾಗಿದ್ದರು. ಪುಣೆ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು, ಇವರ ನಾಯಕತ್ವದಲ್ಲಿ ಶ್ರೇಷ್ಠತೆಯ ಸಾಮರ್ಥ್ಯದೊಂದಿಗಿನ ವಿಶ್ವವಿದ್ಯಾಲಯದ ಸ್ಥಾನಮಾನವನ್ನು ಆ ವಿಶ್ವವಿದ್ಯಾಲಯ ಗಳಿಸಿತು.

ಉನ್ನತ ಶಿಕ್ಷಣ ಫೆಡರೇಶನ್ ಮತ್ತು ಸೂರ್ಯದತ್ತ ಇನ್‌ಸ್ಟಿಟ್ಯೂಟ್‌ನಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಇವರು ಪಡೆದಿದ್ದಾರೆ. ಯುನೆಸ್ಕೋ ಆನರ್, ಸ್ವಾಮಿ ವಿವೇಕಾನಂದ ಪ್ರಶಸ್ತಿ, ಶಿರೋಮಣಿ ಪ್ರಶಸ್ತಿ ಮತ್ತು ದೆಹಲಿ ರತನ್ ಅವಾರ್ಡ್‌ನಂತಹ ಅನೇಕ ಗೌರವಗಳನ್ನು ಇವರು ಗಳಿಸಿದ್ದಾರೆ.

ಕಾರ್ಯನಿರ್ವಾಹಕ ತಂಡಶ್ರೀ ಸುಬ್ರಮಣ್ಯ ಬಿಎನ್,
ಅಧ್ಯಕ್ಷರು


ಶ್ರೀ ಸುಬ್ರಮಣ್ಯ ಬಿ.ಎನ್. ಅವರು ಒಬ್ಬ ಲೆಕ್ಕ ಪರಿಶೋಧಕರಾಗಿದ್ದು, 30 ವರ್ಷಗಳಿಗೂ ಹೆಚ್ಚಿನ ವೃತ್ತಿಪರ ಅನುಭವ ಹೊಂದಿದ್ದಾರೆ.

ಇವರು ಬಿ.ಎನ್.ಸುಬ್ರಮಣ್ಯ ಆಂಡ್ ಕೊ ಎಂಬ ಲೆಕ್ಕ ಪರಿಶೋಧನಾ ಸಂಸ್ಥೆಯ ಸಂಸ್ಥಾಪಕರಾಗಿದ್ದು, ಈ ಸಂಸ್ಥೆ ಮ್ಯಾನೇಜ್‌ಮೆಂಟ್ ಕನ್ಸಲ್ಟೆನ್ಸಿ, ಅಡಿಟ್‌ಗಳು ಮತ್ತು ತೆರಿಗೆ ಸಲಹಾ ಸೇವೆಗಳಲ್ಲಿ ವಿಶೇಷಜ್ಞವಾಗಿದೆ.

ಶಿಕ್ಷಣ, ಆರೋಗ್ಯಸೇವೆ, ಇಂಜಿನಿಯರಿಂಗ್ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಉದ್ಯಮ ಆಸಕ್ತಿಗಳನ್ನು ಹೊಂದಿರುವ ವಿದೇಶಿ ಸಂಸ್ಥೆಗಳು ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಸಾಧಿಸುವಲ್ಲಿ ಅವರು ಅನುಭವ ಹೊಂದಿದ್ದಾರೆ. ಇವರು ಅನ್ವಯಿಕ ವಿಜ್ಞಾನದ ಎಂ.ಎಸ್.ರಾಮಯ್ಯ ಯುನಿವರ್ಸಿಟಿಯ ಆಡಳಿತ ಮಂಡಳಿಯಲ್ಲಿದ್ದಾರೆ. ಗೋಕುಲ ಎಜುಕೇಶನ್ ಫೌಂಡೇಶನ್‌ನಲ್ಲಿ ಕಳೆದ ಮೂರು ದಶಕಗಳಿಂದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಶ್ರೀ. ಮುರಳೀಧರ ಪೊನ್ನಾಲುರಿ,
ಸಿಇಒ


ಇಆರ್‌ಎ ಫೌಂಡೇಶನ್‌ನ ಸಿಇಒ ಆಗಿರುವ ಮುರಳೀಧರ ಪೊನ್ನಾಲುರಿ (ಮುರಳಿ) ಅವರು ಬದಲಾವಣೆಯನ್ನು ಮುನ್ನಡೆಸುವ, ಪ್ರಗತಿ ಸಾಧಿಸುವ ಹಾಗೂ ಸುಸ್ಥಿರತೆ ಖಾತ್ರಿಗೊಳಿಸುವ ಜವಾಬ್ದಾರಿ ಹೊತ್ತಿದ್ದಾರೆ.

ಉತ್ಪನ್ನ ಮತ್ತು ಸೇವೆಗಳ ಸಂಸ್ಥೆಗಳೆರಡರಲ್ಲೂ ವಿವಿಧ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ ಹಾಗೂ ದಿಕ್ಸೂಚಕರಾಗಿ ಮುರಳಿ ಅವರು ತಮ್ಮ ನಾಯಕತ್ವದ ಅನುಭವವನ್ನು ಹೊಂದಿದ್ದಾರೆ. ಕಾರ್ಯಾಚರಣೆ ವರ್ಧನೆಯನ್ನು ಬಯಸುವ ಕಂಪನಿಗಳಿಗೆ ಉದ್ಯಮ ಸಾಮರ್ಥ್ಯಗಳನ್ನು ಸ್ಥಾಪನೆ, ಸಾಮರ್ಥ್ಯಗಳ ನಿರ್ಮಾಣ ಹಾಗೂ ಮಾರುಕಟ್ಟೆ ತಂತ್ರಗಳ ಅನುಷ್ಠಾನದಲ್ಲಿ ಇವರ ಮುಖ್ಯ ಅನುಭವವಿದೆ.

ಈ ಹಿಂದೆ ಮುರಳಿ ಅವರು ದೇಶಾದ್ಯಂತ ಗ್ರಾಮೀಣ ಮತ್ತು ಸಮುದಾಯ ಆಸ್ಪತ್ರೆಗಳ ಕಾರ್ಯಾಚರಣೆ ಆರಂಭ ಹಾಗೂ ತಂತ್ರಜ್ಞಾನ ವರ್ಧನೆ ಬೆಂಬಲ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗ್ರೈಂಜರ್‌ನಲ್ಲಿ ಡೈರೆಕ್ಟರ್ ಸ್ಟ್ರಾಟೆಜಿ, ಟ್ರಯಾನ್ಝ್‌ ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಹಿಂದುಸ್ತಾನ್ ಟೈಮ್ಸ್ ನಲ್ಲಿ ಸಿಒಒ ಆಗಿ ಸೇವೆ ಸಲ್ಲಿಸಿದ್ದರು.

ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಹಾಗೂ ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ಲಭ್ಯತೆ ಹಾಗೂ ಅವಕಾಶವನ್ನು ಖಾತ್ರಿಗೊಳಿಸುವ ಇಆರ್‌ಎ ಫೌಂಡೇಶನ್‌ನ ದೂರದೃಷ್ಟಿ ಚಿಂತನೆ ಹಾಗೂ ತಮ್ಮ ವೈಯಕ್ತಿಕ ಮಿಶನ್ ಎರಡೂ ಜತೆಗೂಡುತ್ತದೆ ಎಂದು ಮುರಳಿ ಅವರು ನಂಬಿದ್ದಾರೆ.

ಮುರಳಿ ಅವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, ಭುವನೇಶ್ವರದ ಕ್ಸೇವಿಯರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.